
25th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.24-ಎಲ್ಲರಲ್ಲೂ ಉದ್ಯಮಶೀಲತಾ ಕೌಶಲ್ಯಗಳು ಇರುತ್ತವೆ. ಸ್ವಸಾಮರ್ಥ್ಯದಿಂದ ಅವುಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಲು ಪ್ರಯತ್ನಿಸಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಬಿ.ಎಸ್.ನಾವಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠ, ಲಘು ಉದ್ಯೋಗ ಭಾರತಿ, ಕರ್ನಾಟಕ ಮತ್ತು ಬಿ.ವಿ.ವಿ. ಸಂಘದ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಕಾಲೇಜಿನ Iಟಿsಣiಣuಣioಟಿ's Iಟಿಟಿovಚಿಣioಟಿ ಅouಟಿಛಿiಟ (IIಅ) & Iಟಿಛಿubಚಿಣioಟಿ ಅeಟಿಣಡಿe ಸಹಯೋಗದಲ್ಲಿ ನಡೆದ ಉದ್ಯಮಶೀಲತಾ ಸಾಮರ್ಥ್ಯದ ಅರಿವು ಮೂಡಿಸುವಿಕೆ ಕುರಿತ ಒಂದು ದಿನದ ಕಾರ್ಯಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮಶೀಲತೆಯ ಕೇಂದ್ರೀಕರಣದ ಅತ್ಯಂತ ವಿಸ್ತಾರವಾದ ಉದ್ಯಮಶೀಲತೆಗೆ ನಿಮ್ಮ ನಿರ್ದಿಷ್ಟ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು.ನಿಮ್ಮದೇ ಆದ ಉದ್ಯೋಗ ಸಾಮರ್ಥ್ಯ ವಿನ್ಯಾಸಕ್ಕೆ ಉತ್ಸಾಹ, ಶಿಸ್ತು, ಸಮಯಪ್ರ್ರಜ್ಞೆ ಅತಿ ಅವಶ್ಯಕ ಎಂದು ಎಂದರು.
ಕರ್ನಾಟಕದ ಲಘು ಉದ್ಯೋಗ ಭಾರತೀಯ ರಾಜ್ಯ ಕಾರ್ಯದರ್ಶಿÀ ಡಾ.ಪ್ರಿಯಾ ಪುರಾಣಿಕ ಮುಖ್ಯ ಅತಿಥಿಗಳಾಗಿ ಮಾತನಾಡಿ, ಆವಿಷ್ಕಾರ ಮತ್ತು ಅಭ್ಯಾಸದ ಮೂಲಕ ಉದ್ಯಮಶೀಲವಾಗಿ ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಹೊಸ ವ್ಯಾಪಾರ ಅವಕಾಶಗಳನ್ನು ಹೇಗೆ ಪರಿಚಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಬಾಗಲಕೋಟೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ್ ಬಾರಿಗಿಡದ ಸರ್ಕಾರದ ಉದ್ಯೋಗ ಯೋಜನೆ ಮತ್ತು ಸವಲತ್ತುಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಡಾ.ಶಿವಲಿಂಗಯ್ಯ.ಎಸ್. ಗೋಥೆ, ಐ.ಕ್ಯೂ.ಎ.ಸಿ ಸಂಯೋಜಕಿ ಗಿರಿಜಾ ನಾವದಗಿ, ಐ.ಸಿ.ಸಿ ಸಂಯೋಜಕ ರಾಮಕೃಷ್ಣ ತ್ಯಾಪಿ ಉಪಸ್ಥಿತರಿದ್ದರು. ಬಾರ್ಸಿ ಶೀತಲ್ ನಿರೂಪಿಸಿದರು. ಕೆ.ಜೆ.ಮಲಜಿ ವಂದಿಸಿದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ